ಚಿಂತಿಸಬೇಕಾದ ಚಿಂತನೆಗಳು:-
ಜಗತ್ತಿನ ಸುಂದರವಾದ ಧರ್ಮಗಳಲ್ಲಿ ಮುಸ್ಲಿಂ ಧರ್ಮವೂ ಒಂದು.ಅದರ ಪವಿತ್ರ ಗ್ರಂಥವಾದ ಕುರಾನ್ ಅಕ್ಷರ ಅಕ್ಷರದಲ್ಲೂ ಶಾಂತಿಯನ್ನೇ ಸಾರುತ್ತದೆ.ಶೇಕಡಾ ಎಂಬತ್ತು ಮಂದಿ ಮುಸಲ್ಮಾನರು ಶಾಂತಿಯನ್ನೇ ಬಯಸುವವರೇ ಆಗಿದ್ದಾರೆ. ಮತ್ತೇಕೆ ಮುಸ್ಲಿಂ ರಾಷ್ಥ್ರಗಳೆಲ್ಲ ಅಶಾಂತಿಯ ಕೊಂಪೆಯಾಗಿದೆ.ತಮ್ಮವರನ್ನೇ ಸಾಯಿಸುತ್ತಾ, ಅಂತರ್ಯುದ್ಧಗಳಲ್ಲಿ ತೊಡಗಿಕೊಂಡಿವೆ. ಎಲ್ಲಿ ಮುಸ್ಲಿಂ ರಾಷ್ಟ್ರವಿದೆಯೋ ಅಲ್ಲಿ ಶಾಂತಿ ಮರಿಚಿಕೆಯಾಗಿದೆ ಅನಿಸುತ್ತದೆಯಲ್ಲವೇ...?
ಕಾರಣ ಒಂದೇ. ಜಗತ್ತಿನ ಮಿಕ್ಕೆಲ್ಲಾ ಧರ್ಮಗಳು ಬದಲಾವಣೆಯಾಗುತ್ತಿರುವ ಜಗತ್ತನ್ನು ಒಪ್ಪಿಕೊಳ್ಳುತ್ತಾ, ಸುಧಾರಣೆಯನ್ನು ಅಪ್ಪಿಕೊಳ್ಳುತ್ತಾ , ಮೂಧನಂಬಿಕೆಗಳ ಗಂಟನ್ನು ಕಳಚಿಕೊಂಡು ಬದಲಾವಣೆಯನ್ನು ತುಂಬು ಹೃದಯದಿಂದ ಸ್ವೀಕರಿಸುತ್ತವೆ. ಆದರೆ ಮುಸ್ಲಿಂ ಧರ್ಮ ಮಾತ್ರ ಬದಲಾವಣೆಯ ಪದಕ್ಕೆ ಕದ ತೆರೆಯುವುದೇ ಇಲ್ಲ. ಮುಸ್ಲಿಂ ಧರ್ಮ ಸ್ಥಾಪನೆಗೊಂಡಾಗ ಅರಬ್ ರಾಷ್ಟ್ರದಲ್ಲಿ ಅರಾಜಕತೆಯಿತ್ತು. ಹೆಂಗಸರಿಗೆ ಭದ್ರತೆ ಅನ್ನುವುದೇ ಇರಲಿಲ್ಲ. ಇದನ್ನು ಕಂಡಂತಹ ಮಹಮದ್ ಪೈಗಂಬರ್ ಹೆಣ್ಣೊಬ್ಬಳು ತನ್ನನ್ನು ತಾನು ಹೇಗೆ ರಕ್ಷಿಸಿಕೊಳ್ಳಬಹುದು. ಅನ್ನುವುದನ್ನು ಬರೆಯುತ್ತಾರೆ. ಅಂದಿಕಾಲಕ್ಕೆ ಎಲ್ಲವೂ ಸರಿಯಾಗಿಯೇ ಇತ್ತು.ಆದರೆ ಕಾಲ ಕಳೆದಂತೆ ಅರಾಜಕತೆ ಅಳಿದು ಹೋಗಿ ಸುಭದ್ರತೆ ಇರುವಾಗಲೂ ಬದಲಾವನೆಗೊಲ್ಲದೆ ಮುಂದುವರಿಯುತ್ತದೆ. 
ಆದರೆ ಕಾಲ ಕಾಲವಾಗಿಯೇ ಉಳಿಯುವುದಿಲ್ಲ. ಸುಧಾರಣೆಯನ್ನು ಬಯಸುವವರು ಮತ್ತು ಮೂಲಭೂತವಾದಿಗಳು ಅನ್ನುವ ಎರಡು ಪಂಗಡಗಳು ಹುಟ್ಟಿಕೊಳ್ಳುತ್ತವೆ. ಸುಧಾರಣವಾದಿಗಳು ಮನರಂಜನೆ, ವಿಧ್ಯಾಭ್ಯಾಸ ಶಾಂತಿ ಎಲ್ಲವೂ ಬೇಕು ಅಂದರೆ, ಮೂಲಭೂತವಾದಿಗಳು ಇದಕ್ಕೆ ವಿರುದ್ಧವಾಗಿರುತ್ತಾರೆ. ತನ್ನ ಧರ್ಮದ ಜನರನ್ನು ಅಂಕೆಯಲ್ಲಿ ಹಿಡಿದಿಡಲು ಪ್ರಯತ್ನಿಸುತ್ತಾರೆ. ಸುಧಾರಣವಾದಿಗಳು ಬಿಡಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಕಲಹ ತನ್ನಿಂದ ತಾನೇ ಸ್ಪೋಟಗೊಳ್ಳುತ್ತದೆ. ತನ್ನವರನ್ನೇ ಸಾಯಿಸುವ ಆಟ ನಿತ್ಯದ ದಿನಚರಿಯಾಗುತ್ತದೆ.ಒಂದು ಸುಂದರವಾದ ಧರ್ಮ ಈ ಮಟ್ಟಕ್ಕೆ ಇಳಿದಾಗ ಮನಸಿಗೆ ಖೇದವಾಗುತ್ತದೆ.....

By-Jaya D Shetty