ಬೆಳಿಗ್ಗೆ ೭:೩೦ ಕ್ಕೆ ನನ್ನ ಹಳೆಯ ಗೆಳಯ ಗೇಬ್ರಿಯಲ್ ಫೋನ್ ಮಾಡಿ " ಎ ಭಟ್ಟಾ ಬಾಗಿಲು ತೆಗೆಯೋ " ಎಂದು ಕಿರುಚುತ್ತಿದ್ದ .
ಒಲ್ಲದ ಮನಸ್ಸಿನಿಂದ ಎದ್ದು ನೋಡಿದರೆ ಮನೆ ಮುಂದೆ ಪ್ರತ್ಯಕ್ಷ ನಾಗಿದ್ದ . ಏನೋ ನಿಂದು ಬೆಳಿಗ್ಗೆ ಬೆಳಿಗ್ಗೆ ಅಂದೆ. ನನ್ನ ಸಿಸ್ಟಮ್ ಹಾಳಾಗಿದೆ ಮಗ ಬೆಳಿಗ್ಗೆನಿಂದ ಗಲಾಟೆ ಮಾಡ್ತಾ ಇದ್ದಾನೆ ಪ್ಲೀಸ್ ಬೇಗಬಾರೋ ಅಂದು ಮನೆ ಒಳಗೆ ನುಗ್ಗಿದ .
ಮುಖಕ್ಕೆ ನಿರೆರಚಿ ಹಲ್ಲುಜ್ಜಲು ಆಗದೆ ಮೌತ್ ವಾಶ್ ಸುರಿದು ಹೊರಟೆ .
ಮನೆಯಲ್ಲಿ ೯ ವರ್ಷದ ಮಗ ಸ್ಯಾಮ್ ನಾಯಿಯನ್ನು ಹಿಡಿದು ಪೀಡಿಸುತ್ತಿದ್ದ ನನ್ನನು ನೋಡಿ ಹಿಡಿತ ಸಡಿಲಿಸಿದಾಗ ನಾಯಿ ಕೂಗುವದನ್ನು ಮರೆತು 'ಅಬ್ಬಾ ಅಂತು ಬಚಾವ ' ಎಂದು ಓಡಿತು . 
ತಗ್ಹೋ ಅದೇ ಹಳೆ ಕತೆ ಎಂದು ಗಣಕಯಂತ್ರ ದ ತಲೆ, ಕಾಲು ,ಬಾಲವನ್ನು ಬೇರೆಮಾಡುತ್ತ ಕುಳಿತೆ .

ಅಪ್ಪನ ಆಪಲ್ ಟ್ಯಾಬ್ ನಲ್ಲೂ ಮಾತಾಡುವ ಬೆಕ್ಕನು ಹಿಡಿದು ಬಂದ.
ಮೊದಲಪ್ರಶ್ನೆ Don’t you have church today ? (ನಿನಗೆ ಪ್ರರ್ಥನಾಲಯಕ್ಕೆ ಹೋಗುವದಿಲ್ಲವೇ ?)

ನಾನು : no (ಇಲ್ಲ )
ಸ್ಯಾಮ್ :So you don't have sins to confess ? ( ಅಂದರೆ ನಿನ್ನಲ್ಲಿ ತಪ್ಪೊಪ್ಪಿ ಕೊಳ್ಳಲು ಪಾಪಗಳೇ ಇಲ್ಲವೇ ?)
ನಾನು ಉತ್ತರ ಹೇಳುವ ಮೊದಲೇ 
ಸ್ಯಾಮ್ : see papa even he don't have sins .(ನೋಡು ಅಪ್ಪ ಇವನು ಪಾಪ ಮಾಡಿಲ್ಲ );

ಗೇಬ್ರಿಯಲ್ ವ್ಯಂಗವಾಗಿ Demons don’t confess (ರಾಕ್ಷಸರು ತಪ್ಪೊಪ್ಪಿ ಕೊಳ್ಳುವದಿಲ್ಲ );

ಸ್ಯಾಮ್ : even i don't have sins (ನಾನು ಪಾಪ ಮಾಡಿಲ್ಲ );

ನಾನು : just few minute before you are troubling that dog (ಹಮ್ ಸ್ವಲ್ಪ ಸಮಯದ ಮೊದಲು ನೀನು 
ನಾಯಿಯನ್ನು ಪೀಡಿಸುತ್ತಿದ್ದೆ )

ಸ್ಯಾಮ್ : eee no no no that was my love not pain (ಏ ಇಲ್ಲಾ ಇಲ್ಲಾ ನಾನು ಮುದ್ದಾಡುತ್ತಿದ್ದೆ , ತೊಂದರೆ ಯಲ್ಲ ) 
ನಾನು :- ok ... (ಸರಿ .....)
ಸ್ಯಾಮ್:- i am true to my heart so i no need to confess ,i am son of my father so for food i no need to pay god, my father and mother feed me . as son of lord he will take care of us and guide in path if its wrong its not sin , because its lords wish .( ನನ್ನ ಆತ್ಮ ಸ್ವಚ್ಚವಾಗಿದೆ. ನಾನು ಅಪ್ಪನ ಸಂತಾನಾವಾದ್ದರಿಂದ ಅಪ್ಪ ಮತ್ತು ಅಮ್ಮ ನನಗೆ ಆಹಾರ ನೀಡುವರು . ದೇವರಲ್ಲಿ ಆಹಾರಕ್ಕಾಗಿ ಬೇಡುವ ಅವಶ್ಯಕತೆ ಇಲ್ಲ. ಭಗವಂತನ ಮಕ್ಕಳಾದ ನಮ್ಮನು ಅವನು ರಕ್ಷಿಸುತ್ತಾನೆ ಮತ್ತು ದಾರಿ ತೋರಿಸುತ್ತಾನೆ . ಅವನು ತೋರಿಸಿದ ದಾರಿ ತಪ್ಪಾದಲ್ಲಿ ಅದು ನಮ್ಮ ಪಾಪವಲ್ಲ ಅದು ಅವನಿಚ್ಚೆ .)

ನನಗೆ ಎನುಮಾತನಾಡಲು ತೋಚಲಿಲ್ಲ 
how can a 9 year old boy can say this ?.

ಗೇಬ್ರಿಯಲ್ : see even he thinks like you 
ನಾನು : i agree with him :
ಸ್ಯಾಮ್ : so i wont come church( and ran away)
ಗೇಬ್ರಿಯಲ್ : ಅದಕ್ಕೆ ನಿಂಗೆ ದೆವ್ವ (demon) ಎಂದು ಹೇಳಿದ್ದು 
ನಾನು : can you deny him (sam)
ಗೇಬ್ರಿಯಲ್ : hay leave yar .
ಅಸ್ಟರಲ್ಲಿ ಗಣಕಯಂತ್ರವು ಜಿವತಳೆದಿತ್ತು . ತತ್ಕ್ಷಣ ದಲ್ಲಿ ಹಾಜರಾದ ಸ್ಯಾಮ್ ಜೋಯ್ ಸ್ಟಿಕ್ ಹಿಡಿದು ಆಟವಾಡಲು ಪ್ರಾರಂಭಿಸಿದ .

ಗೇಬ್ರಿಯಲ್ನ ಪತ್ನಿ ಮಾಡಿದ ಉಪ್ಪಿಟ್ಟು ಬಂದಿತ್ತು , ತಿಂದು ನಾನು ಗೇಬ್ರಿಯಲ್ನ ಬೈಕ್ ನಲ್ಲಿ ಮನೆ ತಲುಪಿದೆ 
ಇನ್ನು ಸ್ಯಾಮ್ ನ ಮಾತುಗಳು ತಲೆಯಲ್ಲಿ ತಿರುಗುತ್ತಿವೆ